Skip to main content

Posts

ಮೋಡ ಕವಿದ ವಾತಾವರಣ

 
Recent posts
 

Just Little Things but hurts more

When a person unexpectedly helped you , but unfortunately you are not able to deserve that help.It hurts, at the same time sometimes we thought like who the hell he is to help me, i not even requested or bargained or pleased him at any point of the time.Yeah please come on that the mistake happened for me right, We have to be calm and keep quite that we have to know things that the mistake made by ourselves only, but the worst part is we scold the person who helped not intentionally but he has some emotions that is overwhelmed and put himself into helping action. The most important and worst part is that we are creating another mistake that would lead to another and goes on. This is a senario that I came across in my life that to in everyday life probably in future.So I remembering these things and put myself into control and not to happen the things bad.                  

ಅಪರಿಚಿತ

  ಅಪರಿಚಿತ ಎಲ್ಲೋ ಹುಟ್ಟಿ ಇನ್ನೆಲ್ಲಿಗೊ ಪಯಣ ಎಲ್ಲಾ ಬದಿಗೊತ್ತಿ ಮತ್ತೆಲ್ಲಿಗೋ ಯಾನ ! ಹುಡುಕಾಟದಲ್ಲಿ ನೆಮ್ಮದಿಯ ತಾಣ ಇದೇ ನಮ್ಮ ಜೀವನ ಕಥನ !! ಶುರುವಾಯಿತೊಂದು ಕತೆ ಹೇಳುವವರ್ಯಾರು ಕೇಳುವವರ್ಯಾರು ! ಸಹಿಸಿಕೊಂಡದ್ದೆ ವ್ಯಥೆ ಆಡಿದವರ್ಯಾರು ಆಡಿಸಿದವರ್ಯಾರು !! ಮೌನ ಎಂದಿನಂತಿಲ್ಲ ಬದುಕಿನ ಪಯಣ ಎಲ್ಲರಿದ್ದರೂ ಯಾರಿಲ್ಲದ ಜೀವನ ! ನಮ್ಮೊಳಗೆ ಶುರುವಾಗಿದೆ ಚಿಂತನ ಮಂಥನ ಎಲ್ಲೆಲ್ಲೂ ಆವರಿಸಿದೆ ಸ್ಮಶಾನ ಮೌನ !! ಸ್ವಗತ ತಿಳಿ ನೀರಲ್ಲಿ ಕಂಡಿದ್ದೆ ನಿನ್ನ ಬಿಂಬ ಅಷ್ಟೇ ಕನಸನ್ನೂ ಕಂಡಿದ್ದೆ ನಿನ್ನ ಸಂಗ ! ಸಹಿಸುವ ತಾಳ್ಮೆ ಇರಲಿಲ್ಲ ನಿನಗಾಗ ನನ್ನ ನಾನೇ ಸಾವರಿಸಿದೆ ನೀನಿಲ್ಲದಾಗ !! ಅಸ್ಪಷ್ಟತೆಯು ನನ್ನ ಕಣ್ಣು ಕುಕ್ಕುತ್ತಿದೆ ಇಂದು ನನ್ನ ತಾಳ್ಮೆಯ ಮಿತಿ ಮೀರಿದೆ ! ಕದಡಿಹೋದದ್ದು ನೀರೋ ಮನವೋ ತಿಳಿಯದಾದೆ ಚಿತ್ತದಲ್ಲಿ ಮೂಡಿದ್ದು ಚಿತ್ರದಲ್ಲೂ ಮೂಡಿದಾಗ ವ್ಯಥೆಪಟ್ಟೆ !!

ನಿರೀಕ್ಷೆ

ಹುಟ್ಟುವಾಗ ಸಮಯದ ನಿರೀಕ್ಷೆ ಸಾಯುವಾಗ ಸ್ವರ್ಗದ ನಿರೀಕ್ಷೆ.. ಆಟದಲ್ಲಿ ಗೆಲ್ಲುವ ನಿರೀಕ್ಷೆ ಸಂಬಂಧದಲ್ಲಿ ವಿಶ್ವಾಸದ ನಿರೀಕ್ಷೆ.. ಪರೀಕ್ಷೆಯಲ್ಲಿ ಪಾಸಗುವ ನಿರೀಕ್ಷೆ ಬರಹಗಾರನಿಗೆ ತನ್ನ ಬರಹದ ನಿರೀಕ್ಷೆ.. ಸಾಗರದಲ್ಲಿ ಅಲೆಗಳ ನಿರೀಕ್ಷೆ.. ಬದುಕಲ್ಲಿ ಬದುಕಿ ಕನಸು ನನಸಾಗಿಸುವ ನಿರೀಕ್ಷೆ... ಹೀಗೆ ನಿರೀಕ್ಷೆಗಳ ಸುತ್ತ ಭರವಸೆಯ ಹುತ್ತ...                                                                              ಇಂತಿ                                                                    ಭಾವಚೇತನ

ಮನೆಯೇ ಮಂತ್ರಾಲಯ

  ನಮ್ಮೆಲ್ಲರಿಗೂ ಮನೆಯೆಂಬುದು ನೆಮ್ಮದಿಯ ಅದೆಷ್ಟೋ ಸಂಗತಿಗಳ , ಸಂತೋಷಗಳ ನೆನಪಿನ ಬುತ್ತಿಯ ಆಗರ.ಮನೆ ಎಂದರೆ ಹೀಗೆಯೇ ಇರಬೇಕೆಂದಿಲ್ಲ ಆದರೂ ಇರುವ ಹಾಗೆಯೇ ಇದ್ದರೆ ಚೆನ್ನ ಎಂಬುದು ನನ್ನ ಅಭಿಪ್ರಾಯ. ಹಳ್ಳಿಗಳಲ್ಲಾದರೆ ಮನೆಯ ಹೊರಗಡೆ ಅಂಗಳ ನಂತರ ಜಗುಲಿ, ನಡುಮನೆ , ಚೌಕಿ , ಅಡುಗೆ ಮನೆ , ಬಚ್ಚಲು ಮನೆ ಹಿತ್ತಲು ಹಾಗೆ ಮೇಲು ಮಹಡಿಯೂ ಕಾಣಸಿಗುತ್ತದೆ.ಆದರೆ ಪೇಟೆಗಳಲ್ಲಿ ಇಷ್ಟೊಂದು ಜಾಗ ಅಭಾವದ ಕಾರಣ ಒಂದು ಹಾಲ್ ಹಾಗೆ ಒಂದು ಕಿಚನ್ ಒಂದು ಬಾತ್ ರೂಮ್ ಗೆ ಮನೆ ಮುಕ್ತಾಯ.ಮನೆಯೇ ಹಾಗೆ ನಮಗೆ ಪ್ರತಿದಿನವೂ ಹೊಸತನದ ಅನುಭವವನ್ನು ನೀಡುತ್ತದೆ. ಬಹಳಷ್ಟು ಜನ ಯಾವುದೋ ಕಾರಣಗಳಿಂದ ವಿದ್ಯಾಭ್ಯಾಸಕ್ಕಾಗಿಯೂ, ಉದ್ಯೋಗಕ್ಕಾಗಿಯೂ ಅಥವಾ ಬೇರೆ ಕೆಲಸಕ್ಕಾಗಿಯೂ ಮನೆ ಬಿಟ್ಟು ಹೊರಗಡೆ ಸಿಟಿಯಲ್ಲಿ ಬಾಡಿಗೆ ಮನೆ ಪಡೆದು ಅಥವಾ ಪಿ ಜಿ ಯಲ್ಲಿ ಇರುತ್ತಾರೆ.ಹುಟ್ಟಿ ಬೆಳೆದ ಮನೆಗೂ ಸಿಟಿ ಮನೆಗೂ ಏನೂ ವ್ಯತ್ಯಾಸವಿಲ್ಲ ಎರಡೂ ಸಹ ಇಟ್ಟಿಗೆ ಸಿಮೆಂಟು ಮರಳಿನ ಸಹಾಯದಿಂದಲೇ ನಿರ್ಮಿತವಾಗಿದ್ದು ಬಹುಶಃ ಹಳ್ಳಿಯದು ಹಳೆಯ ಕಾಲದ ಮನೆ ಎಂದಷ್ಟೆ ತಿಳಿದುಕೊಂಡರೆ ನಮ್ಮಷ್ಟು ಕುರುಡರು ಮತ್ತೊಬ್ಬರಿಲ್ಲ.ಯಾಕೆ ಅಂದ್ರೆ ನಾವು ಹುಟ್ಟಿ ಬೆಳೆದ ಮನೆಯಲ್ಲಿ ನಮ್ಮ ನೆನಪುಗಳೇ ಕೂಡಿದೆ. ಪ್ರತಿ ಜಾಗದಲ್ಲೂ ನಮ್ಮ ನೆರಳಿದೆ.ಹೆತ್ತ ತಾಯಿಯ ಪ್ರೀತಿಯಿದೆ, ಅಪ್ಪನ ಮಮಕಾರವಿದೆ , ಅಜ್ಜನ ಬುದ್ದಿ ಮಾತಿದೆ, ಅಜ್ಜಿಯ ಆಶೀರ್ವಾದವಿದೆ , ಅಕ್ಕನ ಅಕ್ಕರೆಯಿದೆ , ಅಣ್ಣನ ಮುದ್ದಾಟವಿದೆ, ತಮ್ಮ ತ

ನಿಂತ ನೀರಲ್ಲಿ ಕಂಡ ನಿನ್ನ ಬಿಂಬ

 ಸಂಜೆ ಮಳೆಯ ದಿನಗಳಲ್ಲಿ..೨ ಹೀಗೆ ಅಲೆದಾಡುತ್ತಿರುವಾಗ ಮುಂದಿನ ದಾರಿಯೇ ತಿಳಿಯದೆ ಅಸ್ವಸ್ಥನಾದೆ.ಬೀಸುತ್ತಿರುವ ತಂಗಾಳಿ ಹಿಂದೆ ಹೊರಟೆ.ಆದರೂ ಮನಸಿನ ಮೂಲೆಯಲ್ಲೆಲ್ಲೋ ಅತೃಪ್ತಿ ತಟಸ್ಥವಾಗಿತ್ತು.ಆಗಾಗ ಎಡಗಣ್ಣು ಅಪಶಕುನ ಎಂಬಂತೆ ಕುಣಿಯುತ್ತಿತ್ತು.ನಾ ಧೃತಿಗೆಡಲಿಲ್ಲ, ನಿನಗಾಗಿ ಅಲೆದಲೆದಾಡಿದೆ. ಕಾನನದ ಮಧ್ಯದಲ್ಲಿ ನಿನ್ನದೇ ಗೆಜ್ಜೆ ಸಪ್ಪಳವೆಂಬಂತೆ ಹಕ್ಕಿಗಳ ಚಿಲಿಪಿಲಿ ಕೇಳಿಸಿತು.ಈಗೀಗ ದಾರಿ ಸುಗಮವಾಗಿದೆ, ನಿನ್ನಯ ಮೊಗವ ಕಾಣುವ ಇಂಗಿತ ಬಲವಾಗುತಿದೆ. ಕೊನೆಯ ಕ್ಷಣದಲ್ಲಿ ಆ ತಿಳಿ ನೀರಲ್ಲಿ ನಿನ್ನದೇ ಬಿಂಬ ಕಂಡೆ.ಕಾಯುತ್ತಿರುವೆ ಸದಾ ನಿನ್ನ ಸಾನ್ನಿಧ್ಯದ ಆಶಯದೊಂದಿಗೆ.. ಭಾವಚೇತನ Pc: pinterest